Tuesday, April 5, 2011

ಯಕ್ಷಗಾನಕ್ಕೆ ಮೀಸಲಾದ ಸುಂದರ ಮಾಸಪತ್ರಿಕೆ -ಯಕ್ಷರಂಗ


ಯಕ್ಷರಂಗ’ಕರ್ನಾಟಕದ ಯಕ್ಷಗಾನಕ್ಕೆ ಮೀಸಲಾದ ಮಾಸಪತ್ರಿಕೆಯಿದು. ಕಡತೋಕ ಮಂಜುನಾಥ ಭಾಗವತರ ಪುತ್ರ ಗೋಪಾಲಕೃಷ್ಣ ಭಾಗವತ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರು. ಚಿಕ್ಕಂದಿನಿಂದ ಯಕ್ಷಗಾನದ  ವಾತಾವರಣದಲ್ಲಿಯೇ ಬೆಳೆದ ಕಡತೋಕರ ಈ ಪ್ರಯತ್ನ ನಿಜಕ್ಕೂ ಮೆಚ್ಚುವಂತಾದ್ದು   . ಅದಾಗಲೇ ಐದು ವರ್ಷ ಪೂರೈಸಿರುವ ಯಕ್ಷರಂಗಕ್ಕೆ ತನ್ನದೇ ಆದ ಓದುಗರನ್ನು ಒಳಗೊಂಡಿದೆ.ಹಾಗು ಪ್ರತಿ ಪತ್ರಿಕೆಯಲ್ಲಿ ವಿಮರ್ಶಾತ್ಮಕವಾದ ಲೇಖನಗಳು ಗಂಭೀರ ಚಿಂತನೆಗಳನ್ನು ಒಳಗೊಂಡಿರುವುದನ್ನು ಕಾಣುತ್ತೇವೆ. ನಾಲ್ಕು ರಕ್ಷಾಪುಟಗಳು ಬಣ್ಣದಲ್ಲಿ ಪ್ರಕಟವಾದರೆ ಒಳ  ಪುಟಗಳು  ಕಪ್ಪು ಬಿಳುಪು. ಇದುವರೆಗೂ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅದಕ್ಕೇ ಮೀಸಲಾದ ಪತ್ರಿಕೆ ಕನ್ನಡದಲ್ಲಿ ಬೇರಾವುದೂ ಇಲ್ಲ.   ಪತ್ರಿಕೆ ಯಾವ ಮಡಿವಂತಿಕೆಯಿಲ್ಲದೆ ಎಲ್ಲ ವರ್ಗದ ಜನರ ಅಭಿಪ್ರಾಯ, ವಿರೋಧ, ಕಹಿಗಳನ್ನು ಪ್ರಕಟಿಸುವ ಮೂಲಕ ಚರ್ಚೆಗೆ ಒಂದು ಅತ್ಯುತ್ತಮ ವೇದಿಕೆಯನ್ನು ಸೃಷ್ಟಿಸಿಕೊಡುತ್ತಿದೆ ಎನ್ನುವುದು ಹೆಮ್ಮೆಯ ವಿಷಯ... ಈ ಪತ್ರಿಕೆಗೆ ಚಂದಾದಾರರಾಗುವ ಮೂಲಕ , ಪತ್ರಿಕೆಯ ಬೆಳವಣಿಗೆಗೆ ಸಹಕಾರಿಯಾಗಬೇಕೆನ್ನುವುದು ಶ್ರೀ ರಾಮಾರ್ಪಣ ಕಲಾ ವೇದಿಕೆಯ ಆಶಯ.ವಿವರಗಳಿಗೆ ಸಂಪರ್ಕಿಸಿ .... ವ್ಯವಸ್ಥಾಪಕ ಸಂಪಾದಕರು, ಯಕ್ಷರಂಗ ಮಾಸಪತ್ರಿಕೆ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ...