Monday, November 15, 2010

ಶ್ರೀ ಲಕ್ಷ್ಮೀನಾರಾಯಣ ಸಂಪ ಇವರ ಯಕ್ಷ ಜೀವನ ಯಾನ

ಯಕ್ಷ ರಸಿಕರಿಗೆಲ್ಲ ಸಂಪ ಎಂದೇ ಪರಿಚಿತರಾಗಿರುವ ಶ್ರೀ ಎಸ್ ವಿ ಲಕ್ಷ್ಮಿ ನಾರಾಯಣ ಸಂಪ ರಿಗೆ 50 ರ ಸಂಭ್ರಮ ಕಳೆದ ಮೂರುವರೆ ದಶಕಗಳಿಂದ ಯಕ್ಷ ತಿರುಗಾಟದಲ್ಲಿ ತೊಡಗಿಕೊಂಡಿರುವ ಸಂಪ ಅವರು ಆರಂಭದಲ್ಲಿ ವೇಷ ಕಟ್ಟಿ ಕುಣಿದವರು.ಆನಂತರ ಪ್ರಸಿದ್ದ ಚಂಡೆ ವಾದಕರಾಗಿ ಹಿನ್ನೆಲೆಯನ್ನು ಕಟ್ಟಿದವರು ,ಪ್ರಸಿದ್ದ ಮೇಳಗಳಲ್ಲಿ ದುಡಿದಿದ್ದಾರೆ ,ಎಲ್ಲಾ ಹಿರಿಯ ಭಾಗವತರ ಸಂಗಡ ಚಂಡೇವಾದನದಲ್ಲಿ ಸೈ ಎನಿಸಿಕೊಂಡಿದ್ದಾರೆ ,ಯಕ್ಷ ದಿಗ್ಗಜರ ಹೆಜ್ಜೆ ಗಳಿಗೆ ಸಮರ್ಥವಾಗಿ ಒದಗಿಸಿದ್ದಾರೆ ದೇಶದಾದ್ಯಂತ ಯಕ್ಷ ಸಂಚಾರ ದಲ್ಲಿ ಪಾಲ್ಗೊಂಡವರು .ಆಕಾಶವಾಣಿ ,ದೂರದರ್ಶನ ,ಚಲನಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡವರು ,ಮಕ್ಕಳಿಗೆ ಯಕ್ಷ ದೀಕ್ಷೆ ನೀಡಿ ,ಗೆಜ್ಜೆ ಕಟ್ಟಿಸಿದವರು ಯಾವುದೇ ದುರಭ್ಯಾಸಗಳಿಲ್ಲದ ಸಜ್ಜನ ಸುಶೀಲ ಕಲಾವಿದ .ಸಂಪರ ಈ ಯಕ್ಷ ಜೀವನ ಯಾನ  ದಲ್ಲಿ  ಪಾಲ್ಗೊಂಡು ಸಂಭ್ರಮಿಸೋಣ... ಹರೇರಾಮ ....ಯಕ್ಷಗಾನಂಗೆಲ್ಗೆ ...!
ಯಕ್ಷಸಂಪಚಂಡೆನಿನಾದ ಕಾರ್ಯಕ್ರಮದ ಆಡಿಯೋ ಕ್ಕಾಗಿ ಇಲ್ಲಿ ಕ್ಲಿಕ್ಕಿಸಿ....Mph.mp3

No comments:

Post a Comment