"ಮನೆಗೆ ಅಭಿಯಾನ ಅಂಗಳದಿ ಯಕ್ಷಗಾನ" ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಮಾರುತಿಪುರ ಪಂಚಾಯತಿ ವ್ಯಾಪ್ತಿಯ ಹತ್ತಾರು ಮನೆಗಳಲ್ಲಿ ಯಕ್ಷಗಾನ ತಾಳಮದ್ದಲೆ ಹಾಗು ಪ್ರದರ್ಶನ ನೀಡುವ ಎರಡು ದಿನಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕನ್ನಡ ಭಾಷೆಗೆ ಒತ್ತು,ಪೌರಾಣಿಕ ಜ್ಞಾನ ಮತ್ತು ಭಾರತೀಯ ಸಂಸ್ಕೃತಿಗಳ ಮಹತ್ವ ತಿಳಿಸುವ ಮೂಲಕ ಮಹಿಳೆಯರನ್ನು ಮತ್ತು ಯುವಜನರನ್ನು ಯಕ್ಷಗಾನದಂತಹ ನಮ್ಮ ಜಾನಪದ ಕಲೆಗಳತ್ತ ಆಕರ್ಷಿಸುವುದು ನಮ್ಮ ಅಭಿಯಾನದ ಮುಖ್ಯ ಉದ್ದೇಶ.ಎಲ್ಲಾ ಮನೆ ಮನೆಗಳಿಗೆ ತೆರಳಿ ಅಲ್ಲಿಯೇ ಪೌರಾಣಿಕ ಪ್ರಸಂಗಗಳ ಸುಮಧುರ ಗಾನ ,ಚಂಡೆ ಮದ್ದಲೆಗಳ ನಿನಾದದೊಂದಿಗೆ ವಿಷಯ ಮಂಡನೆ ನಡೆಯಿತು
ಉದ್ಘಾಟನೆ
ಯಕ್ಷಗಾನದ ಚಿಂತಕ ರಾಜು ಭಾಗವತರ ನೇತೃತ್ವದಲ್ಲಿ ಕಲಿತ ಹೊಸನಗರ ತಾಲೂಕಿನ ಮುಳುಗುಡ್ಡೆ ಗ್ರಾಮದ ಯುವ ಕಲಾವಿದರು ನಮ್ಮ "ಶ್ರೀ ರಾಮಾರ್ಪಣ" ದ ಸಹಯೋಗದೊಂದಿಗೆ ನಡೆಸಿಕೊಟ್ಟ ಯಕ್ಷಗಾನ 